© Tirachard | Dreamstime.com

ಪದಗುಚ್ಛ ಪುಸ್ತಕ

ಮಾಧ್ಯಮಗಳು ಮತ್ತು ಭಾಷೆ.

© Tirachard | Dreamstime.com
ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.